ಶಾಲೆಯ ಕಥೆ
ಮಕ್ಕಳ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ರೂಪಿಸುವಲ್ಲಿ ಮಾತೃಭಾಷೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಜೀವನದ ಆರಂಭದಿಂದಲೂ ಮಾತೃಭಾಷೆಯನ್ನು ಕಲಿಯುವ ಮಗು, ವ್ಯಾಪಕವಾದ ಭಾಷಾ ಕೌಶಲ್ಯಗಳನ್ನು ಹೊಂದಿದ್ದು, ಅದ್ಭುತವಾದ ಆಲೋಚನಾ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಶುರುವಾದ ಕಾರ್ಯಕ್ರಮವೆ , "ಬೃಂದಾವನ ಕನ್ನಡ ಕಲಿಸೋಣ". ಬೃಂದಾವನ ಕನ್ನಡ ಕೂಟ,ನ್ಯೂಜೆರ್ಸಿಯ ಆಶ್ರಯದಲ್ಲಿ ಶುರುವಾದ ಎಡಿಸನ್ ಕನ್ನಡ ಶಾಲೆ, 25-30ರ ಸ್ಥಿರ ಶಿಷ್ಯ ಶಕ್ತಿಯೊಂದಿಗೆ ವರ್ಷಗಳಲ್ಲಿ ಬೆಳೆದಿದೆ. ಸ್ವಯಂಸೇವಕ ಶಿಕ್ಷಕರು ಮತ್ತು ಸಮುದಾಯದ ಸದಸ್ಯರ ಉತ್ಸಾಹಭರಿತ ಬೆಂಬಲದಿಂದಾಗಿ ಶಾಲೆ ಸಫಲತೆಯಿಂದ ಮುನ್ನಡೆಯುತ್ತಿದೆ . ಬೃಂದಾವನ ಕನ್ನಡ ಕೂಟದ ನೇತೃತ್ವದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಲು ಮಕ್ಕಳಿಗೆ ಅವಕಾಶ ದೊರೆಯುವುದರಿಂದ, ಅವರು ನಾಟಕ, ನೃತ್ಯ, ಗಾಯನಗಳಲ್ಲೂ ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕದ ಸಂಸ್ಕೃತಿ, ಇತಿಹಾಸ, ಕಲೆಗಳ ಪರಿಚಯವೂ ಮಕ್ಕಳಿಗೆ ದೊರೆಯುತ್ತಿದೆ. ಪರದೇಶದಲ್ಲಿದ್ದು ಕೊಂಡೂ ನಮ್ಮ ಮಕ್ಕಳು ಭಾರತೀಯ ಮೌಲ್ಯಗಳನ್ನು ಉಳಿಸಿ, ಬೆಳಿಸಿಕೊಳ್ಳುತ್ತಿದ್ದರೆ.

ಇತ್ತೀಚಿಗೆ ಸೇರ್ಪಡೆಯಾದ ಕನ್ನಡ ಅಕಾಡೆಮಿಯ, ಕನ್ನಡ ಕಲಿ ಪಠ್ಯಕ್ರಮ ಮತ್ತು ಆನ್ಲೈನ್ ಪ್ರಕ್ರಿಯೆಯು, ವಿಷಯ ವಿತರಣೆಯನ್ನು ಸುಗಮಗೊಳಿಸಲು ಸಹಾಯ ಮಾಡಿ, ಕನ್ನಡ ಕಲಿಕೆಯ ಅನುಭವವನ್ನು ಸುಮಧುರಗೊಳಿಸಿದೆ.